top of page
image.png

Need for House?

The primary purpose of the House system is to create a sense of ‘spirit and belonging across the school and allow cadets to mix with each other at different grade level during organized events. ‘It provides a chance for cadets to develop their culture of positive role models within the school’.

What & how it works?

The cadets of the school are grouped in four separate houses. Each house has a House Master/Mistress to whom he/she may turn assistance at any time. Each cadets are placed in any of the four houses and all activities academic, co-curricular are based on inter-house competitions and provide an excellent way to synergize pupils of different classes and ages, all of whom have a common goal and purpose.

The house system was devised to promote team spirit and a sense of belonging to the school. Also, this enables the senior cadets of the school to provide care and direction to their junior. The House System provides excellent opportunities for cadet’s leadership and peer group support. Aided by dedicated staff members, and house captains, it is a remarkable medium for enabling cadets of different ages to bond together and operate as a cohesive family.

Background?

The houses are named after the freedom fighters who exemplified, sacrifice courage, discipline and patriotism. The house names are as follows – Chennamma(Red), Gajanveera(Yellow), Kadamba(Violet) and Mallamma(Green)

 

HOUSES

1. Chennamma:

MOTTO: Sarvada Shakthishaali

 

Rani Chennamma, known as the "Silver Queen of Kittur," was a prominent figure in India's fight for independence. Following the fall of the Vijayanagara Empire, the Kittur principality was established by brothers Hiremallashetty and Chikmallashetty in 1585 in Sagara district (present-day Kallburgi district). Over the span of about 240 years, twelve successive rulers governed the principality. Mallasarja Desai, the second ruler, was particularly noted for his able governance. The tomb of Queen Rudramma, the consort of Mallasarja Desai II, is located near the Malaprabha River in the village of Sangoli.

 

Rani Chennamma, the second wife of Mallasarja Desai, was the daughter of Kakati Dulappa Desai and Prabhavati. Her bravery, sacrifice, and courage were remarkable. When the British government tried to impose the Doctrine of Lapse and deny the adopted son of Mallasarja Desai his rights, Rani Chennamma initiated a fierce resistance. The First Anglo-Kittur War took place on October 23, 1824, where the principality fiercely resisted the British forces, led by Thackeray and Stevenson. Many Anglo officials and soldiers were killed or imprisoned. The principality's people celebrated their victory in grand fashion.

 

The Second Anglo-Kittur War occurred on December 4, 1824, and resulted in Kittur's defeat. Rani Chennamma and her family members were imprisoned in Bailhongal. Rani Chennamma's courage and determination in fighting for the principality's pride and freedom are well-documented. She valiantly resisted the British government's attempts to subdue her. Rani Chennamma's legacy as a fighter for self-respect and freedom still lives on, and her heroic spirit remains a source of inspiration for future freedom fighters."

 

 

ಹೌಸ್

ಸಂಸ್ಥಾನದ ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ಎಂದು ಕರೆಯುತ್ತಾರೆ.ವಿಜಯನಗರ ಸಾಮ್ರಾಜ್ಯ ಪತನದ ನಂತರ.ಕ್ರಿ.ಶ.1585 ರಲ್ಲಿ ಸಗರ ನಾಡಿನ (ಕಲಬುರ್ಗಿ ಜಿಲ್ಲೆಯ)ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಎಂಬ ಸಹೋದರರು ಕಿತ್ತೂರ ಸಂಸ್ಥಾನ ಸ್ಥಾಪಿಸಿದರು.ಸುಮಾರು 240 ವರ್ಷಗಳಲ್ಲಿ ಹನ್ನೆರಡು ದೇಸಾಯಿಯವರ ಆಡಳಿತ ನಡೆಸಿದರು.ಮಲ್ಲಸರ್ಜ ದೇಸಾಯಿ ಆಡಳಿತ ಅತ್ಯಂತ ಉತ್ತಮವಾಗಿತ್ತು.ಈತನ ಪಟ್ಟದ ರಾಣಿ ರುದ್ರಮ್ಮಳ ಸಮಾಧಿ ಸಂಗೊಳ್ಳಿ ಗ್ರಾಮದ ಮಲಪ್ರಭಾ ನದಿ ದಡದಲ್ಲಿದೆ.

 

ದೇಸಾಯಿ ದ್ವಿತೀಯ ಪತ್ನಿ ರಾಣಿ ಚೆನ್ನಮ್ಮ ಬೆಳಗಾವಿ ಸಮೀಪದ ಕಾಕತಿ ದುಳಪ್ಪ ದೇಸಾಯಿ ಮತ್ತು ಪ್ರಭಾವತಿ ಅವರ ಮಗಳು.ಚನ್ನಮ್ಮಾಜಿಯ ದೈರ್ಯ,ತ್ಯಾಗ ಮತ್ತು ಹೋರಾಟ ಮಾದರಿಯಾಗಿದೆ.ಆಂಗ್ಲ ಸರ್ಕಾರದ ಶಿವಲಿಂಗರುದ್ರಸರ್ಜಪುತ್ರ ಸಂತಾನವಿಲ್ಲದೆ ಹಿಂದೂ ಸಂಪ್ರದಾಯ ಪ್ರಕಾರ ಮಾಸ್ತಮರಡಿ ಗೌಡರ ಮಗ ಸವಾಯಿ ಮಲ್ಲಸರ್ಜನ ದತ್ತಕ ಮಾಡಿಕೊಳ್ಳಲು ನಿರ್ಧರಿಸಿದನು ಆದರೆ ಆಂಗ್ಲ ಸರ್ಕಾರದ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಥ್ಯಾಕರೆ ದತ್ತಕ ನಿರಾಕರಿಸಿದನು.ಈ ದತ್ತಕ ನೀತಿ ವಿರುದ್ಧ ಚೆನ್ನಮ್ಮ ಹೋರಾಟ ಆರಂಭಿಸಿದಳು. 23 ಅಕ್ಟೋಬರ 1824 ರಂದು ಪ್ರಥಮ ಆಂಗ್ಲೊ-ಕಿತ್ತೂರ ಯುದ್ಧದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯ ಹೊಂದಿದ ಆಂಗ್ಲ ಸರ್ಕಾರಕ್ಕೆ ರಾಣಿ ಚೆನ್ನಮ್ಮ ಕಿತ್ತೂರು ನೆಲದಲ್ಲಿ ಸೋಲಿನ ರುಚಿ ತೋರಿಸಿದಳು.ಥ್ಯಾಕರೆ ಮತ್ತು ಸ್ಟೀವನ್ಸನ್ ಮುಂತಾದ ಆಂಗ್ಲ ಅಧಿಕಾರಿಗಳು ಸಾವನ್ನಪ್ಪಿದರು.ಅನೇಕ ಆಂಗ್ಲ ಅಧಿಕಾರಿಗಳು ಮತ್ತು ಸೈನಿಕರು ಸೆರೆಸಿಕ್ಕಿರು. ಸರ್ದಾರ್ ಗುರುಸಿದ್ದಪ್ಪ,ಸಂಗೊಳ್ಳಿ ರಾಯಣ್ಣ, ಅವರಾದಿ ವೀರಪ್ಪ ಮುಂತಾದ ಕಿತ್ತೂರಿನ ವೀರರು ಭಾಗವಹಿಸಿದ್ದರು.ಕಿತ್ತೂರ ನಾಡಿನ ಜನತೆ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.04 ಡಿಸೆಂಬರ್ 1824 ರಂದು ನಡೆದ ದ್ವಿತೀಯ ಆಂಗ್ಲೊ-ಕಿತ್ತೂರ ಯುದ್ಧದಲ್ಲಿ ಕಿತ್ತೂರಿಗೆ ಸೋಲು ಉಂಟಾಯಿತು.ಚನ್ನಮ್ಮ ಮತ್ತು ರಾಜ ಪರಿವಾರದ ಸದಸ್ಯರನ್ನು ಬೈಲಹೊಂಗಲ ಗೃಹಬಂಧನದಲ್ಲಿ ಇಡಲಾಯಿತು.ಕಿತ್ತೂರ ಸಂಸ್ಥಾನದ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ದೈರ್ಯ ಮತ್ತು ಸಾಹಸದಿಂದ ಹೋರಾಡಿದ ರಾಣಿ ಚೆನ್ನಮ್ಮ ಬ್ರಿಟಿಷ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದ್ದಾರೆ.ಮುಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಳ್ಳಿ ಚುಕ್ಕಿಯಂತೆ ಕಂಗೊಳಿಸಿ ಮರೆಯಾದರು.

2. Gajanveera:

MOTTO: Parakramo Vijayate

Gajaveera , a dear friend of Sangolli Rayanna, and a leader of the African Negro community. His ancestors hailed from Africa. The Portuguese brought these people to India as slaves through their policy of racial discrimination. Some of them managed to escape and lived in parts of North Karnataka near Goa. They joined the Kittur army, dedicating themselves to the Kittur principality. In the First Anglo-Kittur War, he led the procession with the severed head of the British officer Thackeray on his sword. He participated in the Second Anglo-Kittur War and was subjected to imprisonment.

 

In the struggle against the British rule, during the Inam Kayide Act protest in 1829-30, he steadfastly stood by his community. He served as Sangolli Rayanna's bodyguard and fought for their cause. The British referred to them as "Block Tigers." He organized the Kittur army and initiated a direct war against the British government by attacking Gerilla Mall and Kongu Kahale Nagari. He actively participated in the Anglo-Shetasan battle, displaying unwavering dedication. He fought fiercely alongside his dear friend and was captured with him on April 7, 1830, in Dorihalla of Dharwad taluk. On January 26, 1831, Sangolli Rayanna and his comrades were hung on a banyan tree at Nandagad Outer Valley. During this incident, Gajaveera valiantly challenged the British soldiers and sacrificed his life to protect the life of his friend Sangolli Rayanna. Gajaveera's life and dedication symbolize his sacrifice for the freedom of Kittur region from the African.

 

ಹೌಸ್

 

ಸಂಗೊಳ್ಳಿ ರಾಯಣ್ಣನ ಆತ್ಮೀಯ ಗೆಳೆಯ ಹಾಗೂ ಆಫ್ರಿಕಾದ ನಿಗ್ರೋ ಜನಾಂಗದ ನಾಯಕ.ಈತನ ಪೂರ್ವಿಕರು ಆಫ್ರಿಕಾ ಖಂಡದ ಮೂಲದವರು.ಪೋರ್ಚುಗೀಸರು ವರ್ಣಬೇಧ ನೀತಿಯಿಂದ ಈ ಜನಾಂಗದವರನ್ನು ತಮ್ಮ ಗುಲಾಮರಾಗಿ ಭಾರತಕ್ಕೆ ಕರೆತಂದರು.ಅವರಲ್ಲಿ ಕೆಲವರು ಅವರಿಂದ ತಪ್ಪಿಸಿಕೊಂಡು ಗೋವೆಯ ಸಮೀಪದ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದರು.ಕಿತ್ತೂರು ಸೇನೆಗೆ ಸೇರಿಕೊಂಡರು.ಕಿತ್ತೂರ ಸಂಸ್ಥಾನಕ್ಕೆ ತಮ್ಮನ್ನೆ ತಾವು ಸಮರ್ಪಿಸಿಕೊಂಡರು.ಪ್ರಥಮ ಆಂಗೊ- ಕಿತ್ತೂರ ಯುದ್ದದಲ್ಲಿ ಥ್ಯಾಕರೆಯ ರುಂಡವನ್ನು ತನ್ನ ಖಡ್ಗದ ತುದಿಗೆ ಹಾಕಿಕೊಂಡು ಯುದ್ಧ ಭೂಮಿಯಲ್ಲಿ ಮೆರವಣಿಗೆ ಮಾಡಿದನು. ದ್ವಿತೀಯ ಆಂಗ್ಲೊ- ಕಿತ್ತೂರ ಯುದ್ಧಗಳಲ್ಲಿ ಭಾಗವಹಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

 

ಸಂಗೊಳ್ಳಿ ರಾಯಣ್ಣನ ಆಂಗ್ಲ ಸರ್ಕಾರದ ಇನಾಂ ಕಾಯ್ದೆ ವಿರುದ್ಧ ಕ್ರಿ.ಶ. 1829-30 ರಲ್ಲಿ ನಡೆಸಿದ ಹೋರಾಟದಲ್ಲಿ ಅತ್ಯಂತ ನಿಷ್ಠೆಯಿಂದ ತನ್ನ ಜನಾಂಗದ ಜೊತೆಗೆ ಭಾಗವಹಿಸಿದನು.ಸಂಗೊಳ್ಳಿ ರಾಯಣ್ಣನ ಅಂಗರಕ್ಷಕ ಪಡೆಯ ನಾಯಕನಾಗಿ ಸೇವೆ ಸಲ್ಲಿಸಿದನು.ಬ್ರಿಟೀಷರು ಇವರನ್ನು ಕಪ್ಪು ಹುಲಿಗಳು (Block Tigers) ಎಂದು ಗುರ್ತಿಸಿದ್ದಾರೆ.ಕಿತ್ತೂರ ಸೈನ್ಯ ಸಂಘಟಿಸಿ ಸಂಗೊಳ್ಳಿ ರಾಯಣ್ಣ ಗೆರಿಲ್ಲಾ ಮತ್ತು ಕೊಂಬು ಕಹಳೆ ನಗಾರಿ ಬಾರಿಸುತ್ತಾ ನೇರ ಯುದ್ದವನ್ನು ಆಂಗ್ಲ ಸರ್ಕಾರದ ವಿರುದ್ಧ ಪ್ರಾರಂಭಿಸಿದನು. ಆಂಗ್ಲೋ-ಶೇತಸನದಿ ಹೋರಾಟದಲ್ಲಿ ಗಜವೀರ ಅತ್ಯಂತ ನಿಷ್ಠೆಯಿಂದ ಭಾಗವಹಿಸಿದನು.ತನ್ನ ಆತ್ಮೀಯ ಗೆಳೆಯನ ಬಲಗೈಯ ಬಂಟನಾಗಿ ಹೋರಾಟದಲ್ಲಿ ಧುಮುಕಿದನು.ಕೊನೆಗೆ 1830 ಎಪ್ರಿಲ್ 07 ರಂದು ಧಾರವಾಡ ತಾಲೂಕಿನ ಡೋರಿ ಹಳ್ಳದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಸಹಚರರನ್ನು ಮೋಸದಿಂದ ಬಂಧಿಸಲಾಯಿತು 1831 ಜನೇವರಿ 26 ರಂದು ಸಂಗೊಳ್ಳಿ ರಾಯಣ್ಣ ಮತ್ತು ಸಹಚರರನ್ನು ನಂದಗಡದ ಹೊರವಲಯದ ಆಲದ ಮರಕ್ಕೆ ಗಲ್ಲ ಶಿಕ್ಷೆಗೆ ಗುರಿಪಡಿಸಲಾಯಿತು.ಈ ಸಂದರ್ಭದಲ್ಲಿ ಗಜವೀರ ತೀವ್ರವಾಗಿ ಪ್ರತಿಭಟಿಸಿ ಆಂಗ್ಲರ ಗುಂಡಿಗೆ ಬಲಿಯಾದನು.ತನ್ನ ಜೀವದ ಗೆಳೆಯ ಸಂಗೊಳ್ಳಿ ರಾಯಣ್ಣನ ಪ್ರಾಣ ರಕ್ಷಣೆ ಮಾಡಲು ತನ್ನ ಜೀವ ಮತ್ತು ಜೀವನ ಸಮರ್ಪಿಸಿದ ತ್ಯಾಗಮಯಿ.ಆಪ್ರಿಕಾ ಖಂಡದಿಂದ ಬಂದು ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕೆ ಪ್ರಾಣಾರ್ಪಣೆ ಮಾಡಿದ ಗಜವೀರ ಮಾದರಿ ವ್ಯಕ್ತಿಯಾಗಿದ್ದಾನೆ.

3. Kadamba:

 

 

MOTTO: Success, Nothing Less

The Kadamba dynasty was the first royal lineage of Karnataka. Established by Mayuravarma (345-365 AD), this kingdom grew to become a significant empire. The Kadamba rulers ruled with authority from 345-825 AD. The first historical inscription found in Kannada, known as the Halumidi inscription, is related to the Kadamba reign. Their capital was Banavasi, situated on the banks of the Varada river in present-day Uttara Kannada district. Their second capital was Halasi, located in the Khanapur taluk of the present-day Belgaum district.

 

The poet Pampa's Vikramarjuna Vijaya describes the beauty of the Banavasi region and mentions the usage of Varada river water during Arjuna's coronation. Through the lines 'Aranku Samitthodanda Nenevudenna Manan, Banavasi Desham and Puttadiru Dodemanadi Kogileyagi Nandanavana Dene', they express the deep connection they had with the land of Banavasi. The Kadamba kingdom included Goa and Hanyakal branches. King Kakusthavarma was a powerful ruler, and during his reign, the Kadamba kingdom encompassed several regions of Karnataka. The Kadamba dynasty, with their lion emblem and flag, was the first royal lineage to promote the Kannada language and literature. Under their rule, Kannada and literature flourished. They had matrimonial alliances with the northern Gupta Empire, indicating the grandeur of the kingdom. The dynasty's end was marked by constant warfare and Jain conversions.

ಹೌಸ್

ವಂಶವು ಕನ್ನಡದ ಮೊಟ್ಟ ಮೊದಲ ರಾಜವಂಶ.ಕ್ರಿ.ಶ. ೩೪೫ ರಲ್ಲಿ ಮಯೂರವರ್ಮ (೩೪೫ - ೩೬೫) ಅವರಿಂದ ಸ್ಥಾಪಿಸಲಾದ ಈ ರಾಜ್ಯವು,ಬೃಹತ್ ಸಾಮ್ರಾಜ್ಯವಾಗಿ ಬೆಳೆಯಿತು. ಕದಂಬ ರಾಜರುಗಳು ೩೪೫ -೫೨೫ ರಿಂದ ಹತ್ತು ಅರಸರು ಆಳ್ವಿಕೆ ನಡೆಸಿದರು ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದೆ.ಇವರ ರಾಜಧಾನಿ ಬನವಾಸಿ ಇಂದಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ವರದಾ ನದಿಯ ಎಡದಂಡೆ ಮೇಲಿದೆ.ಇವರ ಎರಡನೆ ರಾಜಧಾನಿ ಹಲಸಿ ಇಂದಿನ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿದೆ.ಪಂಪನ ಮಹಾಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿ ಪ್ರದೇಶದ ಸೌಂದರ್ಯದ ವಿವರಣೆ ಮತ್ತು ಅರ್ಜುನನ ಪಟ್ಟಾಭಿಷೇಕದ ಸಮಯದಲ್ಲಿ ವರದಾ ನದಿಯ ನೀರು ಅಭಿಷೇಕಕ್ಕೆ ಬಳಸಿದ ಉಲ್ಲೇಖ ಬರುತ್ತದೆ."ಆರಂಕುಸಮಿತ್ತೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಮತ್ತು ಪುಟ್ಟದಿರ್ದೊಡೆ ಮರಿದುಂಬಿಯಾಗಿ ಮೆನ್ ಕೋಗಿಲೆಯಾಗಿ ನಂದನವನದೊಳ್ ಬನವಾಸಿದೇಶದೊಳ್"ಎಂಬ ಸಾಲುಗಳ ಮೂಲಕ ಅವರು ಬನವಾಸಿಯ ಬಗ್ಗೆ ಆಳವಾದ ಬಾಂಧವ್ಯವನ್ನು ವ್ಯಕ್ತಪಡಿಸಿದ್ದಾರೆ.ಕದಂಬ ರಾಜ್ಯ ಗೋವಾ ಮತ್ತು ಹಾನಗಲ್ಲ ಶಾಖೆಗಳನ್ನು ಹೊಂದಿತ್ತು.ರಾಜಾ ಕಾಕುಸ್ಥವರ್ಮ ಬಲಾಢ್ಯ ಅರಸನಾಗಿದ್ದು ಈತನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನು ಒಳಗೊಂಡಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.ಇವರ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಸಮೃದ್ಧವಾಗಿ ಬೆಳವಣಿಗೆ ಕಂಡಿತು ಸಿಂಹ ಲಾಂಛನ ಮತ್ತು ಧ್ವಜ ಹೊಂದಿದ್ದು. ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ.ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ, ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.

4. Mallamma:

MOTTO: Quest For Victory

"Queen Mallamma of Belavadi, her name is unfamiliar among Kannadigas. Even today, in Indian history, she is remembered as the 'Warrior Queen.' Queen  Mallamma is synonymous with her bravery. Even the mightiest warriors trembled before her courage. She was the queen of the Belavadi principality in the present-day Belagavi district of Karnataka. She was born in 1660 as the daughter of King Madhulinga Nayaka, who ruled the principality of Sonda from 1638 to 1674. Along with her brother Sadasiva Nayaka, she learned education and the art of warfare. Queen Mallamma married Raja Eeshaprabhu in 1676 and became known as Belavadi Mallamma. She is also referred to as 'Savitribai.'

 

Queen Mallamma fought against Chhatrapati Shivaji Maharaj. She engaged in a battle against Shivaji's forces near Yadavagiri village, where they had attacked the Danakaruga region of the Belavadi principality. Queen Mallamma, along with Raja Eeshaprabhu, initiated the battle with Shivaji's soldiers. In this battle, Raja Eeshaprabhu lost his life. She was the first female ruler in Indian history to lead her 'Mahila Pade' (female soldiers) actively in battle. They were skilled in the art of combat and fought alongside their horses. Queen Mallamma's leadership was prominent among her army. Her bravery, resoluteness, and fearlessness are admired by all.

 

The battle between Queen Mallamma and Chhatrapati Shivaji Maharaj continued for seventeen days. Despite her defeat, Queen Mallamma's courage and bravery were appreciated by Shivaji. Alongside her two thousand female soldiers, she fought valiantly. She stood up against the misconduct of some Maratha soldiers and even saved Shivaji Maharaj's personal bodyguard during the battle.

 

Queen Mallamma's courage is evident in her clash with Shivaji's forces near Yadavagiri in 1678. Though Shivaji's personal bodyguard fled, she continued to fight. Despite facing defeat, Shivaji Maharaj was inspired by Queen Mallamma's valor and courage. She installed the idol of Shivaji Maharaj in the Hanuman temple at Yadavagiri village.

 

The coronation ceremony of Queen Mallamma's son Nagabhushana, as mentioned by historian Jadunath Sarkar in his book on Shivaji's life history, was personally conducted by Shivaji Maharaj. She is also mentioned in the Sanskrit text 'Shivavansha Sudharnava' written by her mentor Shankar Bhatta."

 

ಮಲ್ಲಮ್ಮ

ಮಲ್ಲಮ್ಮ ಹೆಸರು ಕೇಳಿದ ಕನ್ನಡಿಗರಿಲ್ಲ.ಭಾರತದ ಇತಿಹಾಸದಲ್ಲಿ ಇಂದಿಗೂ ‘ಯೋಧ ರಾಣಿ’ ಎಂದೇ ನೆನಪಾಗುತ್ತಾರೆ.ರಾಣಿ ಮಲ್ಲಮ್ಮ ತನ್ನ ಶೌರ್ಯಕ್ಕೆ ಹೆಸರುವಾಸಿ.ಅವರ ಧೈರ್ಯದ ಮುಂದೆ ದೊಡ್ಡ ದೊಡ್ಡ ಯೋಧರು ಸಹ ನಡುಗುತ್ತಿದ್ದರು.

ಈಗಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಸಂಸ್ಥಾನದ ರಾಣಿಯಾಗಿದ್ದರು.ಇವರು ಸೋಂದಾ ಸಂಸ್ಥಾನದ ಕ್ರಿ.ಶ.1638-74 ರಲ್ಲಿ ಆಳ್ವಿಕೆ ನಡೆಸಿದ ರಾಜ ಮಧುಲಿಂಗ ನಾಯಕನ ಮಗಳಾಗಿ ಕ್ರಿ.ಶ.1660 ರಲ್ಲಿ ಜನಿಸಿದಳು. ಅಣ್ಣನಾದ ಸದಾಶಿವ ನಾಯಕ ಜೊತೆಗೆ ವಿದ್ಯೆ ಮತ್ತು ಸಮರ ಕಲೆಗಳನ್ನು ಕಲಿತಳು.ಬೆಳವಡಿ ಸಂಸ್ಥಾನದ ರಾಜಾ ಈಶಪ್ರಭು ಜೊತೆಗೆ ಕ್ರಿ.ಶ.1676 ರಲ್ಲಿ ವಿವಾಹ ಮಾಡಿಕೊಂಡು ಬೆಳವಡಿ ಮಲ್ಲಮ್ಮ ಎಂದು ಹೆಸರಾಳದಳು. ‘ಸಾವಿತ್ರಿಬಾಯಿ’ ಎಂದು ಕರೆಯಲ್ಪಡುವ ರಾಣಿ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರ ವಿರುದ್ಧ ಹೋರಾಡಿದಳು. ಯಾದವಾಡ ಗ್ರಾಮದ ಹತ್ತಿರ ಬೀಡುಬಿಟ್ಟಿರುವ ಶಿವಾಜಿ ಸೈನ್ಯ ಬೆಳವಡಿ ಸಂಸ್ಥಾನದ ದನಕರುಗಳ ಅಪಹರಿಸಿದರು.ರಾಜಾ ಈಶಪ್ರಭು ತನ್ನ ಸೇನೆಯೊಂದಿಗೆ ಶಿವಾಜಿ ಸೈನಿಕರೊಂದಿಗೆ ಯುದ್ದ ಪ್ರಾರಂಭಿಸಿದನು.ಈ ಯುದ್ಧದಲ್ಲಿ ಈಶಪ್ರಭು ಹುತಾತ್ಮನಾದನು

ಇತಿಹಾಸದಲ್ಲಿ ಮಹಿಳೆಯರ ಪ್ರತ್ಯೇಕ ‘ಯುದ್ಧ ಪಡೆ’ ಹೊಂದಿದ್ದ ಮೊದಲ ಆಡಳಿತಗಾರ್ತಿ ರಾಣಿ ಮಲ್ಲಮ್ಮ.ಅವರ ಈ ಮಹಿಳ ಸೈನ್ಯ 'ಯುದ್ಧ ಕೌಶಲ್ಯ’ದಲ್ಲಿ ಪರಿಣಿತಿ ಹೊಂದಿತ್ತು.ಈ ಮಹಿಳಾ ಸೈನಿಕರು ಕತ್ತಿ ಹಿಡಿದು ತಮ್ಮ ಕುದುರೆಯೊಂದಿಗೆ ಹೋರಾಟಕ್ಕೆ ಸಿದ್ಧರಾದರು.ರಾಣಿ ಮಲ್ಲಮ್ಮ ಸೈನ್ಯದ ನೇತೃತ್ವ ವಹಿಸಿದ್ದರು.ರಾಣಿ ಮಲ್ಲಮ್ಮಾಜಿ ಧೈರ್ಯ,ದಿಟ್ಟತನ ಮತ್ತು ನಿರ್ಭಯತೆ ಎಲ್ಲಾರಿಗೂ ಮಾದರಿಯಾಗಿದೆ.ರಾಣಿ ಮಲ್ಲಮ್ಮ ಮತ್ತು ಶಿವಾಜಿ ಮಹಾರಾಜರ ನಡುವೆ ಇಪ್ಪತ್ತೇಳು ದಿನಗಳ ಕಾಲ ಯುದ್ಧ ಪಡೆಯಿತು.ರಾಣಿ ತನ್ನ ಎರಡು ಸಾವಿರ ‘ಮಹಿಳಾ ಪಡೆ’ಯೊಂದಿಗೆ ಹೋರಾಟ ಮುಂದುವರೆಸಿದ್ದು ಅವಳ ಎದೆಗಾರಿಕೆಗೆ ಸಾಕ್ಷಿಯಾಗಿದೆ. ಛತ್ರಪತಿ ಶಿವಾಜಿ ಸೈನಿಕರಿಗೆ ಯಾದವಾಡದಲ್ಲಿ ಕ್ರಿ.ಶ.1678 ರಲ್ಲಿ ಸೋಲಿನ ರುಚಿ ತೋರಿಸಿದಳು. ಶಿವಾಜಿ ತನ್ನ ಅಂಗರಕ್ಷಕ ಪಡೆಯೊಂದಿಗೆ ಲೋಕೂರಿನ ದ್ಯಾಮವ್ವನ ದರ್ಶನ ಪಡೆದು ಮರಳುವ ಸಂದರ್ಭದಲ್ಲಿ ರಾಣಿ ಮಲ್ಲಮ್ಮ ದಾಳಿ ನಡೆಸಿದಳು. ಶಿವಾಜಿಯ ಅಂಗರಕ್ಷಕ ಪಡೆ ದಿಕ್ಕಾಪಾಲಾಗಿ ಓಡಿಹೋಯಿತು. ಛತ್ರಪತಿ ಶಿವಾಜಿ ಮಹಾರಾಜರು ಯುದ್ಧದಲ್ಲಿ ಸೋತರೂ ರಾಣಿ ಮಲ್ಲಮ್ಮನ ಶೌರ್ಯ ಮತ್ತು ಧೈರ್ಯಕ್ಕೆ ಬೆರಗಾಗಿದ್ದರು.ಈ ಸಮರದಲ್ಲಿ ರಾಣಿ ಮಲ್ಲಮ್ಮ ತನ್ನ ‘ಮಹಿಳಾ ಸೈನಿಕರ’ ಜೊತೆ ಅನುಚಿತವಾಗಿ ವರ್ತಿಸಿದ ಮರಾಠ ಸೈನಿಕರ ಬಗ್ಗೆ ಶಿವಾಜಿಗೆ ದೂರು ನೀಡಿದರು.ಶಿವಾಜಿ ತನ್ನ ಸೈನಿಕರಿಗೆ ಶಿಕ್ಷೆ ನೀಡಿದ್ದನು.ಶಿವಾಜಿಯ ಈ ನಡವಳಿಕೆಯಿಂದ ಸಂತಸಗೊಂಡ ರಾಣಿ ಮಲ್ಲಮ್ಮ ಯಾದವಾಡ ಗ್ರಾಮದ ಹನುಮಾನ ದೇವಾಲಯದಲ್ಲಿ ಶಿವಾಜಿ ಮಹಾರಾಜರ ವಿಗ್ರಹವನ್ನು ಪ್ರತಿಷ್ಠಾಪಿಸಿದರು.ಅದನ್ನು ಇಂದಿಗೂ ಕಾಣಬಹುದು.ಈಶಪ್ರಭು ಮತ್ತು ಮಲ್ಲಮ್ಮ ಅವರ ಮಗ ನಾಗಭೂಷಣ ಇವರ ಪಟ್ಟಾಭಿಷೇಕ ಮಹೋತ್ಸವವನ್ನು ಸ್ವತಃ ಶಿವಾಜಿ ಮಹಾರಾಜರು ನಡೆಯಿಸಿದರು. ಛತ್ರಪತಿ ಶಿವಾಜಿಯ ಜೀವನ ಚರಿತ್ರೆ ಬರೆದ ಇತಿಹಾಸಕಾರ ಜಾದುನಾಥ ಸರ್ಕಾರ ಉಲ್ಲೇಖಿಸಿದ್ದಾರೆ.ಶಿವಾಜಿ ಮಗ ರಾಜಾರಾಮನ ಪತ್ನಿ ಕೊಲ್ಲಾಪುರದ ರಾಣಿ ತಾರಿಬಾಯಿ ಕ್ರಿ.ಶ. 1707 ರಲ್ಲಿ ತಮ್ಮ ಆಸ್ಥಾನದ ವಿದ್ವಾಂಸ ಶ್ರೀನಿವಾಸ ಮುತಾಲಿಕ ಅವರಿಂದ ಮರಾಠಿ ಭಾಷೆಯಲ್ಲಿ "ಶಿವಾಜಿ ಮತ್ತು ಮಲ್ಲಮ್ಮಾಜಿ ಸಮರೋತ್ಸವ" ಎಂಬ ಕೃತಿ ಬರೆಯಿಸಿದರು. ರಾಣಿ ಮಲ್ಲಮ್ಮಳ ಗುರುಗಳಾದ ಶಂಕರ ಭಟ್ಟರು ಬರೆದ ‘ಶಿವ ವಂಶ ಸುಧಾರ್ಣವ’ ಎಂಬ ಸಂಸ್ಕೃತ ಗ್ರಂಥದಲ್ಲೂ ಉಲ್ಲೇಖವಾಗಿದೆ.

image.png
image.png
image.png
image.png
bottom of page